ಕೋಳಿ ರೊಟ್ಟಿ
ಕುಂದಾಪುರ ಸ್ಪೆಷಲ್ ಕೋಳಿ ರೊಟ್ಟಿ ಮನೆಯಲ್ಲಿ ಮಾಡಿನೋಡಿ.
ಕೋಳಿ ರೊಟ್ಟಿ ಮಾಡುವ ವಿಧಾನ :
- ಚಿಕನ್ ಅನ್ನು ಸ್ವಚ್ ಗೊಳಿಸಿ ಮತ್ತು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನೆನೆಯಲು ಬಿಡಿ.
- ಕಡಾಯಿಯನ್ನು ತೆಗೆದುಕೊಂಡು ತುಪ್ಪದಲ್ಲಿ ಈರುಳ್ಳಿ ಮತ್ತು ತೆಂಗಿನಕಾಯಿ ಹಾಕಿ 5 - 7 ನಿಮಿಷ ಕಡಿಮೆ ಉರಿಯಲ್ಲಿ ಅದು ಕಂದು ಬಣ್ಣ ಬರುವ ತನಕ ಹುರಿದು ಕೊನೆಯದಾಗಿ ಅರಿಶಿಣ ಪುಡಿ ಹಾಕಿ ಮತ್ತು ಒಂದು ನಿಮಿಷ ಬೇಯಿಸಿ ಕಡಾಯಿ ಇಂದ ತೆಗೆದು ತಣ್ಣಗಾಗಲು ಪಕ್ಕಕ್ಕಿರಿಸಿ.
- ನಂತರ ಶುಂಠಿ ಮತ್ತು ಹುಣಸೆಹಣ್ಣು ಸೇರಿಸಿ ಮಿಕ್ಸರ್ ಗ್ರೈಂಡರ್ನಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಸೇರಿಸಿ ಅದನ್ನು ಪೇಸ್ಟ್ ಆಗಿ ಮಾಡಿ.
- 1 ಟೀಸ್ಪೂನ್ ತುಪ್ಪ , ದಾಲ್ಚಿನ್ನಿ ಮತ್ತು ಲವಂಗ ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಕೆಲವು ಸೆಕೆಂಡುಗಳ ನಂತರ ಈರುಳ್ಳಿ ಮತ್ತು ಟೊಮೆಟೊ ಹಾಕಿ ಅದು ಕಂದು ಬಣ್ಣ ಬರುವವರೆಗೆ ಹಾಗೂ ಮೆತ್ತಗಾಗುವವರೆಗೆ ಬೇಯಿಸಿ ನಂತರ ಚಿಕನ್ನ ಸೇರಿಸಿ ಸ್ವಲ್ಪ ಸಮಯದವರೆಗೆ ಬೇಯಿಸಿ.
- ತುರಿದ ತೆಂಗಿನಕಾಯಿಯಿಂದ ತೆಂಗಿನ ಹಾಲನ್ನು ತೆಗೆಯಿರಿ.
- ನಂತರ ಮಸಾಲೆ ಪೇಸ್ಟ್ ಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದಕ್ಕೆ ತೆಂಗಿನ ಹಾಲು ಸೇರಿಸಿ ಒಂದು ಮುಚ್ಚಳದಿಂದ ಮುಚ್ಚಿ 5 ನಿಮಿಷ ಬೇಯಲು ಬಿಡಿ.
- ಕೊನೆಯದಾಗಿ ಒಂದು ಚಮಚ ತುಪ್ಪ ಸುರಿಯಿರಿ ನಂತರ ಒಲೆಯನ್ನು ಆಫ್ ಮಾಡಿ.
- ಅಂಗಡಿಯಿಂದ ರೊಟ್ಟಿಯನ್ನು ಖರೀದಿಸಿ, ಅವುಗಳನ್ನು ಸ್ವಲ್ಪ ಪುಡಿಮಾಡಿ ಮತ್ತು ಚಿಕನ್ಸಾಂಬಾರ್,ಅದರ ಮೇಲೆ ಸುರಿಯಿರಿ ಹಾಗೂ ನೀವು ತಿನ್ನುವ ಮೊದಲು ಅದನ್ನು ಸ್ವಲ್ಪ ನೆನೆಯಲು ಬಿಡಿ. ಈಗ ರುಚಿಕರವಾದ ಕೋಳಿ ರೊಟ್ಟಿ ಸವಿಯಲು ಸಿದ್ಧ.

Comments
Post a Comment